ಈಕವಿಯ ಬಗ್ಗೆ




ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ - ಈಕವಿ
ELLA KANNADA ABHIMAANIGALA VEDIKE INTERNATIONAL - EKAVI


"ಈ-ಕವಿ" ಸಂಸ್ಥೆಯು ಕನ್ನಡನುಡಿಗಾಗಿ,  ಕನ್ನಡನಾಡಿಗಾಗಿ,  ಕನ್ನಡಿಗರಿಗಾಗಿ ಸದಾಕಾಲ ದುಡಿಯುವ ಸಲುವಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ."  ಈ-ಮೇಲ್, ಅಂತರ್ಜಾಲ ಇತ್ಯಾದಿ ಮಾಧ್ಯಮಗಳ ಮೂಲಕ ಜನಗಳಲ್ಲಿ ಕನ್ನಡ ಜಾಗೃತಿಯನ್ನು ಮೂಡಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ. ಈ ಗುರಿಯನ್ನು ಮುಟ್ಟುವ ಸಲುವಾಗಿ "ಈ-ಕವಿ" ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ, ಪ್ರತಿ ತಾಲ್ಲೂಕುಗಳಲ್ಲಿ ಶಾಖೆಗಳನ್ನು ಪ್ರಾರಂಭಿಸುವ ಯೋಜನೆಯಲ್ಲಿ ಕಾರ್ಯಪ್ರವೃತ್ತವಾಗಿದೆ.
 
ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಕೆಲಸ ಮಾಡುವುದು ಮತ್ತು ಈ ಕ್ಷೇತ್ರದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಸಾವಿರಾರು ಪ್ರತಿಭಾನ್ವಿತ ಕನ್ನಡಿಗರನ್ನು ಗುರುತಿಸಿ ಮುಂದಕ್ಕೆ ತರುವುದು ಈ ಕವಿಯ ಮೂಲ ಉದ್ದೇಶಗಳಲ್ಲಿ ಒಂದಾಗಿದೆ.

ಈ-ಕವಿ" ಸಂಸ್ಥೆಯು ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ದತ್ತುತೆಗೆದುಕೊಳ್ಳುವ, ಬಡ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕೊಡುವ, ಬಡಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ, ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ಮಕ್ಕಳನ್ನು ಭೇಟಿಮಾಡಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಯೋಜನೆಗಳನ್ನು ಹಮ್ಮಿಕೊಂಡಿದೆ.

ಬೆಂಗಳೂರಿನಲ್ಲಿ ಮತ್ತು ಹೊರದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ತಮ್ಮ ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿಗಳ ಬಗ್ಗೆ ಚಿಂತಿಸಿ, ತನ್ನನ್ನು ಬೆಳೆಸಿದ ಊರಿಗೆ ಸಹಾಯ ಮಾಡುವ ಒಂದು ಸುವರ್ಣಾವಕಾಶ "ಈ-ಕವಿ" ಯಲ್ಲಿ ಕಲ್ಪಿತವಾಗಿದೆ.  ಈ ವಿಷಯವನ್ನು ಬೆಂಗಳೂರು ಮತ್ತು ಹೊರದೇಶದಲ್ಲಿ ಇರುವ, ನಿಮ್ಮ ಸ್ನೇಹಿತರಿಗೆ ಮತ್ತು ಫ್ಯಾಮಿಲಿ ಮೆಮ್ಬೇರ್ಸ್ ಗೆ ತಿಳಿಸಿ.

ಈಕವಿ ಕನ್ನಡ ಗಣಕೀಕರಣದ ಏಳಿಗೆ ಹಾಗೂ ಅವನತಿ ಯನ್ನು ಜನ ಸಾಮಾನ್ಯರಿಗೆ ತಿಳಿಸುತ್ತಾ ಇದೆ.


ಈಕವಿಯ ಮೂರು ಮುಖ್ಯ ಗುರಿಗಳು ಮತ್ತು ಉದ್ದೇಶಗಳು.
ಎಲ್ಲಾ ಕನ್ನಡಿಗರು ಮತ್ತು  ಕನ್ನಡ ಸಂಸ್ಥೆಗಳು, ಪತ್ರಿಕೆಗಳು,
ಮೂರು ಗುರಿಗಳನ್ನು ಕಾರ್ಯಗತ ವಾಗಲು ಪ್ರಯತ್ನ ಪಡಬೇಕು.
ವಿದ್ಯಾವಂತ ನಾಗರೀಕರು ಜಾಗೃತಿ ಆಗೋ ಕಾಲ ಬಂದಿದೆ.


ಆಡಳಿತದಲ್ಲಿ ಕನ್ನಡ ಹೋರಾಟ: ಕರ್ನಾಟಕ ಸರ್ಕಾರ ದಲ್ಲಿ, ಕನ್ನಡ ಆಡಳಿತ ದಲ್ಲಿ ಕಡ್ಡಾಯ ವಾಗ ಬೇಕಾದರೆ, ಕನ್ನಡ ತಂತ್ರಾಂಶ ಸರಿಪಡಿಸಬೇಕು. ಕನ್ನಡಿಗರಿಗೆ ಇದೆ ಮೊದಲನೆಯ ಕೆಲಸ. ಕನ್ನಡಿಗರಿಂದ ಕನ್ನಡಕ್ಕೆ ಅನ್ಯಾಯ ಆಗಿದೆ ಮತ್ತು ಅನ್ಯಾಯ ಮಾಡಿದ್ದರೆ.  ಈಕವಿ  ಕನ್ನಡ ಗಣಕ ತಂತ್ರಾಂಶ ಅಭಿವೃದ್ಧಿಯ ವಿಚಾರವನ್ನುಕೈಗೆತ್ತಿಕೊಂಡಿದ್ದು, ಅದು ಅತ್ಯಂತ ಉಪಯುಕ್ತ ಮತ್ತು ಫಲಕಾರಕ ರೀತಿಯಲ್ಲಿ ಹೊರಬರುವಂತೆ ಮಾಡಲು ಪ್ರಯತ್ನಿಸುತ್ತಿದೆ. ಕನ್ನಡ ಆಡಳಿತ ಭಾಷೆ ಆಗಬೇಕಾದರೆ ಕನ್ನಡ ತಂತ್ರಾಂಶ ಅಭಿವೃದ್ದಿ ಆಗಬೇಕು ಕರ್ನಾಟಕ ಸರಕಾರದಲ್ಲಿ.

ವಿ ಎಮ್ ಕುಮಾರಸ್ವಾಮಿ