Wednesday, January 5, 2011

//ಈ ಕವಿ // ಈ ಕವಿತೆ, ಕನ್ನಡಿಗರಿಗಾಗಿ ….!!!!!

//ಈ ಕವಿ // ಈ ಕವಿತೆ, ಕನ್ನಡಿಗರಿಗಾಗಿ ….!!!!!

ನಾನು ಸಾಮಾನ್ಯವಾಗಿ ಉದ್ದೇಶಪೂರ್ವಕವಾಗಿ ಯಾವುದೇ ಕವಿತೆಯನ್ನು ಬರೆಯುವುದಿಲ್ಲ..
ಅದು ಯಾವುದೋ ಏಕಾಂತದಲ್ಲಿ ತನ್ನಿಂದ ತಾನೇ ಅರಳುವ ಭಾವಕುಸುಮ.
ಆದರೆ ಈ ಕವಿ ಯಾ ಅಭಿಮಾನದ, ಮೇಲೆ ಈ ಕವಿತೆ, ಕನ್ನಡಿಗರಿಗಾಗಿ ….!!!!!

दिशा/ದಿಶಾ/DISHA

================

//ಈ ಕವಿ //


ಹುಟ್ಟಿದೆ ನೋಡಾ
ಹೊಳೆ ಯುತಲಿದೆ ನೋಡಾ
ಈ ಕವಿಯೇಮ್ಬ ಮೋಡ/
ಕನ್ನಡ ಕಂಪನು,
ಜಗದಗಲ ಹರಡಲು,
ಹೆಗಲಾಗಿಹ ನೋಗವು,
ಈ ಕವಿ ನೋಡಾ /
ಕನ್ನಡ ಮನಗಳ
ಕನಸಿನ ತೇರು,
ಕನ್ನಡ ಯಜ್ಞದ
ಧೀರ ಮುಂದಾಳು,/
ಈ ಕವಿ ಮೋಡ ಸುರಿಸುತಿಹುದು ನೋಡಾ
ಕನ್ನಡ,ಕನ್ನಡ ವೆಂಬ ಜಲಧಾರೆ,
ಈ ಜೀವ ಜಲದಲ್ಲೇ,
ಕನ್ನಡ ಬೀಜ,
ಗಿಡವಾಗಿ, ಮರವಾಗಿ
ಆಗುತಿಹುದು ಕಲ್ಪವೃಕ್ಷ,/
ಇದಕಿರಲಿ ನಿಮ್ಮೆಲ್ಲರ ಅಭಯ,
ಕನ್ನಡಕ್ಕಿಲ್ಲ ಇನ್ನು ಯಾವ ಭಯ//
ಹುಟ್ಟಿದೆ ನೋಡ //ಫ //

===========================================================
दिशा/ದಿಶಾ/DISHA,
ಈಕವಿ ಕನ್ನಡಿಗರಿಗೆ ಕನ್ನಡಕ್ಕೋಸ್ಕರ ಕರ್ನಾಟಕಕ್ಕೆ ಒಳ್ಳೆಯುದು ಆಗಲಿ ಅಂತ ಕೆಲಸ ಮಾಡುತ್ತಿದೆ.
ಈಕವಿ ಮಾಡುತ್ತಿರುವುದನ್ನು ನೋಡಿ ಗಮನಿಸಿ ನೀನು ಬರೆದ ಈ ಕವಿತೆ ಬಹಳ ಸೊಗಸಾಗಿದೆ.
EKAVI – ELLAKAVI – VMK

No comments:

Post a Comment