Wednesday, January 5, 2011

ಈ-ಕವಿಯ ಭಾವಚಿತ್ರ ಮತ್ತು ಭುವನೇಶ್ವರಿಯ ಕುರಿತು

ಈ-ಕವಿಯ ಭಾವಚಿತ್ರ ಮತ್ತು ಭುವನೇಶ್ವರಿಯ ಕುರಿತು
—————————————————————
ಭೂಗೋಳದ ಮಧ್ಯದಲ್ಲಿಹುದು
ಈ ಕವಿಯ ಹೊಂದಿದ
ಕಾಂತಿ ತುಂಬಿದ ಕರ್ನಾಟಕ
ಎಲ್ಲೆಡೆ ಪಸರಿಸುತಿದೆ ಈ-ಕವಿಯ ಕಾಂತಿ ಪುಂಜ
ಕಣ್ಮನ ತಣಿಸುತಿದೆ ಇದರ ಕಾರ್ಯ ವೈಖರಿ
ಅದಕ್ಕಾಗಿ ನಾ ನಮಿಸುವೆ
ಈ ದಿವ್ಯ ಕಾಂತಿಗೆ
ಸಪ್ತಾಶ್ವಗಳ ನಡೆಸುತಿರುವೆ ನೀ ತಾಯೆ ರವಿಯಂತೆ
ಅಷ್ಟ ದಿಕ್ಕುಗಳಿಗೂ ಸಂಚರಿಸುವೆ ನೀನು ವಾಯುವಿನಂತೆ
ಗರುಡನ ಮೇಲೇರಿ ಸಂಚರಿಸುವೆ ನೀನು ದೇಶ-ವಿದೇಶಗಳಿಗೆ ಗಗನದಲ್ಲಿ
ಎಲ್ಲೆಲ್ಲು ಕನ್ನಡದ ಕಂಪನ್ನು ಪಸರಿಸುವೆ ನೀ ತಾಯೆ ಭುವನೇಶ್ವರಿ
ಕನ್ನಡದ ಸಿರಿದೇವಿ ನೀನು ರಾಜರಾಜೇಶ್ವರಿ

====================================

ತುಳಸಿ.ಸಿ.ವಿಜಯಕುಮಾರಿ
ನಂ.೭, ಶ್ರೀ ತುಳಸಿಧಾಮ
ಕಾಳಿದಾಸ ರಸ್ತೆ, ವಿ.ವಿ.ಮೊಹಲ್ಲ,
ಮೈಸೂರು – ೫೭೦೦೦೨
ಮೈಸೂರು ಸಾಹಿತ್ಯ ವೇದಿಕೆಯ ಕಾರ್ಯ ಕಾರಿ ಸಮಿತಿ ಸದಸ್ಯೆ

=====================================

No comments:

Post a Comment